" ಗಣಿತವೆಂದರೆ ಕುಣಿತ. ದೃಷ್ಟಿಕೋನ ಬದಲಾದರೆ ದೃಶ್ಯವೂ ಬದಲಾದೀತೂ..! ."
ಎಸ್.ಎಸ್.ಎಲ್.ಸಿ & ಪಿ.ಯು.ಸಿ ಫಲಿತಾಂಶ ಬಂದಾಗ ಸಾಮಾನ್ಯವಾಗಿ ಅನುತ್ತೀರ್ಣವಾಗುವ ವಿದ್ಯಾರ್ಥಿಗಳಿಗೆ ಕೇಳುವ ಮೊದಲ ಪ್ರಶ್ನೆ ಎಂದರೆ, "ಗಣಿತದ ಜೊತೆ ಮತ್ತೆ ಯಾವ್ಯಾವ ವಿಷಯಗಳು ಹೋಗ್ಯಾವು? ಅಷ್ಟು ನಂಬಿಕೆ ಅವರಿಗೆ; ಗಣಿತದಲ್ಲಿ ಖಂಡಿತ ಫೇಲ್ ಆಗಿರುತ್ತಾರೆ ಅಂತ.ಗಣಿತ ಎಂದರೆ MOST DIFFICULT, ಗಣಿತ ಎಂದರೆ ಮಹಾ BORING, ಗಣಿತ ಎಂದರೆ ಎಂದಿಗೂ ತಲೆಗೆ ಹೋಗದ ವಿಷಯ ಎಂದು ಕೆಲವು ಜನರ ಅಭಿಪ್ರಾಯ. ಅದರೆ ಇದು ಅಭಿಪ್ರಾಯ ಮಾತ್ರ. ವಾಸ್ತವ ಅಲ್ಲ. ಗಣಿತದ ಬಗ್ಗೆ ಬಹುತೇಕರ ಮನಸ್ಥಿತಿ ಏಕೆ ಹೀಗೆ...??
ಆದಿ ಅನಾದಿ ಕಾಲದಿಂದಲೂ ನಮಗೆ ಕಲಿಸಿದ ಕೆಲವು ಮೇಷ್ಟ್ರುಗಳು, ಪಾಲಕರು, ಸಮಾಜ, ಸುದ್ದಿ ಮಾದ್ಯಮಗಳು ಎಲ್ಲಾ ಸೇರಿ " ಗಣಿತ ಎಂದರೆ ಅರ್ಥವಾಗದ ದೇವಭಾಷೆ, ತುಂಬಾ ಕಠಿಣ." ಎಂಬ ವಿಚಾರವನ್ನು ಪೀಳಿಗೆಯಿಂದ ಪೀಳಿಗೆಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿದ್ದಾರೆ/ಮಾಡುತ್ತಿದ್ದಾರೆ; ಅದರ ಪ್ರತಿಫಲವೇ ಇಂದು ಬಹುತೇಕ ಮಕ್ಕಳಿಗೆ ಗಣಿತ ಎಂದರೆ ತುಂಬಾ ಕಠಿಣ, ಗಣಿತ ಎಂದರೆ ಭಯ, ಗಣಿತ ಎಂದರೆ ವಜ್ರಮುನಿ. ಹೌದು ನಮ್ಮ MIND SET ತುಂಬಾ MATTER ಆಗುತ್ತದೆ. ನಾವು ಯಾವ ಬಣ್ಣದ ಚಷ್ಮಾ ಹಾಕಿಕೊಂಡಿರುತ್ತೇವೆಯೋ ಜಗತ್ತು ಬಣ್ಣವಾಗಿ ಕಾಣುತ್ತದೆ. ಅದಕ್ಕೆ ಇರಬೇಕು ʼಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಅಂತʼ. ತುಂಬಾ ದಿನಗಳಿಂದ ʼಗಣಿತ ತುಂಬಾ ಕಠಿಣದ ತರಹ ಕಾಣುವʼ ಚಷ್ಮಾದಿಂದಾನೇ ಗಣಿತವನ್ನು ನೋಡಿಸಲಾಗುತ್ತಿದೆ. ಅದರ ಪರಿಣಾಮವೇ ಇದು.
ದೃಷ್ಟಿಕೋನ ಬದಲಾದರೆ ದೃಶ್ಯವೂ ಬದಲಾದೀತು....
ತುಂಬಾ ದಿನಗಳ ಹಿಂದೆ ನಡೆದ ಸತ್ಯಕಥೆ ಇದು, ತುಂಬಾ ಸ್ಪೂರ್ತಿದಾಯಕವಾಗಿದೆ ನೋಡಿ.ಒಂದುಬಾರಿ ಕಾಲೇಜಿನ ತರಗತಿಯೊಂದರಲ್ಲಿ ಅದ್ಯಾಪಕರು ಉಪನ್ಯಾಸ ಮುಗಿದಮೇಲೆ ಕಪ್ಪು ಹಲಗೆಯ ಮೇಲೆ ಎರಡು ಸಮಸ್ಯೆಗಳನ್ನು ಬರೆದು " ಈ ಎರಡೂ ಸಮಸ್ಯೆಗಳು ಜಗತ್ತಿನ ಬಹುತೇಕ ಗಣಿತಜ್ಞರಿಗೆ ಸವಾಲಾಗಿ ಪರಿಣಮಿಸಿವೆ;ಇಲ್ಲಿಯವರೆಗೆ ಈ ಸಮಸ್ಯೆಗಳನ್ನು ಯಾರೂ ಬಿಡಿಸಲು ಸಾಧ್ಯವಾಗಿಲ್ಲ.ʼ ಎಂದು ಹೇಳಿಮುಗಿಸಿ ಬೇರೊಂದು ವಿಷಯ ಚರ್ಚೆ ಮಾಡುತ್ತಿರುತ್ತಾರೆ ಅದೇ ವೇಳೆಗೆ ಒಬ್ಬ ವಿದ್ಯಾರ್ಥಿ ತರಗತಿ ತಡವಾಗಿ ಅಗಮಿಸಿ ಕಪ್ಪು ಹಲಗೆಯತ್ತ ಕಣ್ಣು ಹಾಯಿಸಿತ್ತಾನೆ.2 ಸಮಸ್ಯೆಗಳು ಕಾಣುತ್ತವೆ. ಅವುಗಳು HOME WORK ನೀಡಲಾದ ಸಮಸ್ಯೆಗಳಿರಬಹುದೆಂದು ಭಾವಿಸಿ ಬರೆದುಕೊಂಡು ಮನೆಗೆ ಹೋಗಿ ಬಿಡಿಸಲು ಪ್ರಯತ್ನಿಸುತ್ತಾನೆ;ಸಾಧ್ಯವಾಗುವುದಿಲ್ಲ.ಛಲಬಿಡದೇ ನಿರಂತರ ಪ್ರಯತ್ನಿಸಿ ಕೊನೆಗೂ ಅ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತಾನೆ. ಮಾರನೇ ದಿನ ಸಮಸ್ಯೆಗಳ ಪರಿಹಾರವನ್ನು ಅಧ್ಯಾಪಕರಿಗೆ ತೋರಿಸುತ್ತಾನೆ. ಅದ್ಯಾಪಕರು ಆಶ್ಚರ್ಯಚಕಿತರಾಗಿ ಸಂತೋಷದಿಂದ ವಿದ್ಯಾರ್ಥಿಯನ್ನು ಪ್ರಶ್ನೆಮಾಡುತ್ತಾರೆ. "ಇವು ತುಂಬಾ ಕಠಿಣ ಸಮಸ್ಯೆಗಳು ಜಗತ್ತಿನಲ್ಲಿ ಇವುಗಳನ್ನು ಯಾರಿಂದಲೂ ಬಿಡಿಸಲು ಸಾಧ್ಯವಾಗಿಲ್ಲ ನೀನು ಇಷ್ಟು ಸುಲಭವಾಗಿ ಹೇಗೆ ಬಿಡಿಸಿದೆ? ಆಗ ಆ ವಿದ್ಯಾರ್ಥಿ ವಿನಮ್ರತೆಯಿಂದ ಉತ್ತರಿಸುತ್ತಾನೆ, "ಸರ್ ಇವೆರೆಡೂ ಸಮಸ್ಯೆಗಳು HOME WORK ನೀಡಲಾದ ಸಮಸ್ಯೆಗಳಿರಬಹುದೆಂದು ಭಾವಿಸಿ ಸರಳವಾಗಿ ಬಿಡಿಸಬಹುದು ಎಂದು ನಂಬಿ ಪ್ರಯತ್ನಿಸಿದೆ.ಸಾಧ್ಯವಾಯಿತು ಸರ್" ಎಂದು ಹೇಳುತ್ತಾನೆ. ಮುಂದೆ ಆ ವಿದ್ಯಾರ್ಥಿ ಒಬ್ಬ ಶ್ರೇಷ್ಟ ಗಣಿತಜ್ಙನಾಗುತ್ತಾನೆ.
ಈ ಕಥೆಯಿಂದ ತಿಳಿದುಕೊಳ್ಳುವ ಅಂಶ ಏನೆಂದರೆ "ಸಕಾರಾತ್ಮಕ ಮನೋಬಾವದಿಂದ ಸಾಧ್ಯ ಎಂದು ನಿರಂತರ ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ."
ಗಣಿತವೆಂದರೆ ಇಷ್ಟೇ.....
ಗಣಿತವೆಂದರೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಈ ನಾಲ್ಕು ಮೂಲಕ್ರಿಯೆಗಳು ಮಾತ್ರ. ಈ ನಾಲ್ಕೂ ಮೂಲಭೂತ ಕ್ರಿಯೆಗಳನ್ನು ಸರಿಯಾಗಿ ಮಾಡಲು ಕಲಿತರೆ ನೀವು ಗಣಿತವನ್ನೇ ಸರಿಯಾಗಿ ಮಾಡಿದಂತೆ. ಸಮಯ ಸಂದರ್ಭಕ್ಕನುಸಾರವಾಗಿ ನಿರ್ಧಿಷ್ಟ ನಿಯಮಕ್ಕೆ ಅನುಸಾರವಾಗಿ ಈ 4 ಮೂಲಕ್ರಿಯೆಗಳನ್ನು ಮಾಡುವುದಷ್ಟೇ ಗಣಿತ. ಗಣಿತವನ್ನು ಅಭ್ಯಾಸ ಮಾಡುವುದು ಎಂದರೆ ಪರಿಕಲ್ಪನೆ ಅರ್ಥಮಾಡಿಕೊಂಡು ಓದುತ್ತಾ ಬರೆಯುವುದು ಎಂದರ್ಥ. ಗಣಿತ ಸರಿಯಾಗಿ ಅರ್ಥವಾಗಬೇಕಾದರೆ ನಿರಂತರತೆ ತುಂಬಾ ಮುಖ್ಯ. ಒಂದೇ ರೀತಿಯ ಹಲವಾರು ಸಮಸ್ಯೆಗಳನ್ನು ಬಿಡಿಸಿ ರೂಡಿಸಿಕೊಳ್ಳುವುದು ಮತ್ತೊಂದು ತಂತ್ರ. ಇದಿಷ್ಟೇ ಗಣಿತ, ಇನ್ನಾದರೂ ಗಣಿತವನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ. ಮುಂದಿನ ದಿನಮಾನಗಳಲ್ಲಿ "ಗಣಿತವೆಂದರೆ ತುಂಬಾ ಸರಳ, ಅತೀ ಸುಂದರ, ಅತೀ ಕುತೂಹಲಕಾರಿ, ನಮ್ಮ ಬೌದ್ದಿಕ/ಮಾನಸಿಕ ವಿಕಾಸಕ್ಕೆ ತುಂಬಾ ಸಹಕಾರಿಯಾಗುವ ವಿಷಯವೆಂದರೆ ಅದು ಗಣಿತ". "ನನಗೆ ಅಚ್ಚುಮೆಚ್ಚಿನ ವಿಷಯವೆಂದರೆ ಅದು ಗಣಿತ". ಎಂದು ತರಗತಿಯ ಬಹುತೇಕ ವಿದ್ಯಾರ್ಥಿಗಳು ಹೇಳುವ ದಿನಗಳು ಆದಷ್ಟೂ ಬೇಗ ಬರಲಿ ಎಂದು ಆಶಿಸುತ್ತಾ...ಸರ್ವರಿಗೂ ಜಗತ್ತು ಕಂಡ ಶ್ರೇಷ್ಟ ಮೇದಾವಿ ಗಣಿತಜ್ಞ ಭಾರತೀಯರ ಹೆಮ್ಮೆ ಶ್ರೀನಿವಾಸ ರಾಮಾನುಜನ್ ಜಯಂತಿಯ ಹಾಗೂ ʼರಾಷ್ಟ್ರೀಯ ಗಣಿತ ದಿನಾಚರಣೆʼಯ ಹಾರ್ಧಿಕ ಸುಭಾಷಯಗಳು.
ಜೈ ಗಣಿತಾಂಬೆ... ಗಣಿತವೆಂದರೆ ಕುಣಿತ.....ಇಲ್ಲಿ ಪ್ರತಿ ಸ್ಟೆಪ್ಸ್ ಗೂ ಅಂಕಗಳಿರುತ್ತವೆ....!
ಚಂದ್ರಶೇಖರ ಫ. ಜೋಗಿನ, ಗಣಿತ ಶಿಕ್ಷಕರು
ಹೊಳೆಇಟಗಿ ತಾ:ಶಿರಹಟ್ಟಿ ಜಿ:ಗದಗ
ಮೊ : 9945821074
ಚಂದ್ರಶೇಖರ ಜೋಗಿನ ಗುರುಗಳಿಗೆ ತುಂಬಾ ಧನ್ಯವಾದಗಳು ಬಹಳ ಅರ್ಥಪೂರ್ಣವಾಗಿ ಗಣಿತದ ಬಗ್ಗೆ ಇರುವ ಅಪನಂಬಿಕೆಯನ್ನು ತಿಳಿಸಿಕೊಟ್ಟಿದ್ದಿರಾ..ನಿಜವಾಗಿ ನಮ್ಮ ದೃಷ್ಟಿ ಬದಲಾದರೆ ಎಲ್ಲವೂ ಬದಲಾಗುತ್ತದೆ...ಮಕ್ಕಳು ಕೂಡ ಅದೆ ನಿಟ್ಟಿನಲ್ಲಿ ಪ್ರಯತ್ನಿಸಬೇಕು..
ReplyDeleteನಿಮ್ಮ ಗಣಿತದ ಕಾಳಜಿಯುಕ್ತ ಪ್ರತಿಕ್ರಿಯೆಗೆ ಹೃದಯಪೂರ್ವಕ ಧನ್ಯವಾದಗಳು...ಸರ್..
DeleteSsuper sir.
ReplyDeleteKeep it....sir.
🙏🙏
Thanks For Your Feedback sir
DeleteVery nice written about maths....who master in maths ...is master of all subjects...., ,
ReplyDeleteThank you sir n you are true...
DeleteSuperb sir sir
ReplyDeleteThanks sir
DeleteSuper sir 🙏🙏💐💐
ReplyDeleteThank you sir
DeleteGolzarmoll700@gm
ReplyDelete