" ಗಣಿತವೆಂದರೆ ಕುಣಿತ. ದೃಷ್ಟಿಕೋನ ಬದಲಾದರೆ ದೃಶ್ಯವೂ ಬದಲಾದೀತೂ..! ."
ಎಸ್.ಎಸ್.ಎಲ್.ಸಿ & ಪಿ.ಯು.ಸಿ ಫಲಿತಾಂಶ ಬಂದಾಗ ಸಾಮಾನ್ಯವಾಗಿ ಅನುತ್ತೀರ್ಣವಾಗುವ ವಿದ್ಯಾರ್ಥಿಗಳಿಗೆ ಕೇಳುವ ಮೊದಲ ಪ್ರಶ್ನೆ ಎಂದರೆ, " ಗಣಿತದ ಜೊತೆ ಮತ್ತೆ ಯಾವ್ಯಾವ ವಿಷಯಗಳು ಹೋಗ್ಯಾವು? ಅಷ್ಟು ನಂಬಿಕೆ ಅವರಿಗೆ; ಗಣಿತದಲ್ಲಿ ಖಂಡಿತ ಫೇಲ್ ಆಗಿರುತ್ತಾರೆ ಅಂತ. ಗಣಿತ ಎಂದರೆ MOST DIFFICULT , ಗಣಿತ ಎಂದರೆ ಮಹಾ BORING , ಗಣಿತ ಎಂದರೆ ಎಂದಿಗೂ ತಲೆಗೆ ಹೋಗದ ವಿಷಯ ಎಂದು ಕೆಲವು ಜನರ ಅಭಿಪ್ರಾಯ. ಅದರೆ ಇದು ಅಭಿಪ್ರಾಯ ಮಾತ್ರ. ವಾಸ್ತವ ಅಲ್ಲ. ಗಣಿತದ ಬಗ್ಗೆ ಬಹುತೇಕರ ಮನಸ್ಥಿತಿ ಏಕೆ ಹೀಗೆ...?? ಆದಿ ಅನಾದಿ ಕಾಲದಿಂದಲೂ ನಮಗೆ ಕಲಿಸಿದ ಕೆಲವು ಮೇಷ್ಟ್ರುಗಳು, ಪಾಲಕರು, ಸಮಾಜ, ಸುದ್ದಿ ಮಾದ್ಯಮಗಳು ಎಲ್ಲಾ ಸೇರಿ " ಗಣಿತ ಎಂದರೆ ಅರ್ಥವಾಗದ ದೇವಭಾಷೆ, ತುಂಬಾ ಕಠಿಣ." ಎಂಬ ವಿಚಾರವನ್ನು ಪೀಳಿಗೆಯಿಂದ ಪೀಳಿಗೆಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿದ್ದಾರೆ/ಮಾಡುತ್ತಿದ್ದಾರೆ; ಅದರ ಪ್ರತಿಫಲವೇ ಇಂದು ಬಹುತೇಕ ಮಕ್ಕಳಿಗೆ ಗಣಿತ ಎಂದರೆ ತುಂಬಾ ಕಠಿಣ , ಗಣಿತ ಎಂದರೆ ಭಯ , ಗಣಿತ ಎಂದರೆ ವಜ್ರಮುನಿ. ಹೌದು ನಮ್ಮ MIND SET ತುಂಬಾ MATTER ಆಗುತ್ತದೆ. ನಾವು ಯಾವ ಬಣ್ಣದ ಚಷ್ಮಾ ಹಾಕಿಕೊಂಡಿರುತ್ತೇವೆಯೋ ಜಗತ್ತು ಬಣ್ಣವಾಗಿ ಕಾಣುತ್ತದೆ. ಅದಕ್ಕೆ ಇರಬೇಕು ʼಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿಯೇ ಅಂತʼ . ತುಂಬಾ ದಿನಗಳಿಂದ ʼಗಣಿತ ತುಂಬಾ ಕಠಿಣದ ತರಹ ಕಾಣುವʼ ಚಷ್ಮಾದಿಂದಾನೇ ಗಣಿತವನ್ನು ನೋಡಿಸಲಾಗುತ್...